ಸುದ್ದಿ ಮತ್ತು ಅಪ್ಡೇಟ್ಗಳು

ಕೃಷಿ ಮತ್ತು ತೋಟಗಾರಿಕೆ

ಕೈದಿಗಳಲ್ಲಿ ಬಹುಪಾಲು ಮಂದಿ ಕೃಷಿ ಪ್ರಧಾನ ಕುಟುಂಬಗಳಿಂದ ಬರುವುದರಿಂದ ಅವರಿಗೆ ಆಧುನಿಕ ರೀತಿಯಲ್ಲಿ ಕೃಷಿ ಹಾಗೂ ತೋಟಗಾರಿಕೆಯಲ್ಲಿ ತರಬೇತಿ ನೀಡಲು ಆದ್ಯತೆ ಕೊಡಲಾಗಿದೆ. ಇದರಿಂದ ಅವರು ಬಿಡುಗಡೆಯಾಗಿ ಹೋದ ಮೇಲೆ ಒಳ್ಳೆಯ ಕೃಷಿಕಾರಗಳು ಮತ್ತು ತೋಟಗಾರಿಕಾ ಕುಶಾಲಿಗಳಾಗುವುದಕ್ಕೆ ಅನುಕೂಲವಾಗುತ್ತದೆ. ಭೂಮಿ ಹದ ಮಾಡಿ, ಗೊಬ್ಬರ ಹಾಕಿ, ಬೀಜ ಬಿತ್ತುವುದರಿಂದ ಹಿಡಿದು ಔಷಧಿಗಳ ಉಪಯೋಗವನ್ನೊಳಗೊಂಡು ಬೆಳೆಗಳನ್ನು ಕಟಾವು ಮಾಡುವವರೆಗೆ ಈ ತರಬೇತಿ ವಿಸ್ತರಿಸಲ್ಪಟ್ಟಿದೆ. ಈ ಉದ್ದೇಶಕ್ಕಾಗಿ ಪ್ರತಿಯೊಂದು ಕೇಂದ್ರ ಹಾಗೂ ಜಿಲ್ಲಾ ಕಾರಾಗೃಹಗಳಿಗೆ ಹೊಂದಿಕೊಂಡಂತೆ ಕೃಷಿಗೆ ಯೋಗ್ಯವಾದ ಭೂಮಿ ಇದೆ. ಈ ಭೂಮಿಯಲ್ಲಿ ತರಕಾರಿಗಳನ್ನು ಹಾಗೂ ಧಾನ್ಯಗಳನ್ನು ಬೆಳೆಯಲಾಗುತ್ತಿದೆ. ವ್ಯವಾಸಯಕ್ಕೆ ಅನುಕೂಲವಾಗಲು ಆಧುನಿಕ ಸಲಕರಣೆಗಳು ಟ್ರಾಕ್ಟರ್ಗಳನ್ನು ನೀಡಲಾಗಿದೆ ಹಾಗೂ ಹನಿ ನೀರಾವರಿ ಪದ್ದತಿಯನ್ನು ಸಹ ಅಳವಡಿಸಲಾಗಿದೆ.

ಮಜೂರಿ ಗಳಿಕೆ ಯೋಜನೆ

ಬಂದಿಗಳಿಗೆ ಸಜಾ ಆಗಿ ಅವರು ಕಾಯ್ದೆ ಪ್ರಕಾರ ದುಡಿಯಲೇಬೇಕಾದರೂ , ಅದು ಬಲವಂತದ ದುಡಿತವಾಗಬಾರದು ಹಾಗೂ ಅವರು ಕೆಲಸಕ್ಕೆ ಉತ್ತೇಜನ ರೂಪದಲ್ಲಿಯಾದರೂ ವೇತನ ಕೊಡಬೇಕು ಎಂಬುದು ಆಧುನಿಕ ಚಿಂತನೆಯಾಗಿದೆ. ಅಲ್ಲದೆ ಹಾಗೆ ಕೊಡುವ ವೇತನ ಅವರಿಗೂ, ಅವರ ಮನೆ ಮಕ್ಕಳಿಗೂ ಸ್ವಲ್ಪ ಆಸರೆಯಾಗಬಹುದು ಎಂಬ ಒಂದು ಘನ ಉದ್ದೇಶದಿಂದ ಕರ್ನಾಟಕ ರಾಜ್ಯದಲ್ಲಿ ಕೈದಿಗಳು ವೇತನಗಳಿಸುವ ಯೋಜನೆಯು ಅಸ್ತಿತ್ವದಲ್ಲಿದೆ. ಹೀಗೆ ವೇತನವನ್ನು ಆಯಾ ಕೈದಿಗಳ ವ್ಯಯಕ್ತಿಕ ಲೆಕ್ಕದಲ್ಲಿ ಜಮಾ ಮಾಡಲಾಗುವುದು. ಕೈದಿಗಳಿಗೆ ತಾವು ಗಳಿಸಿದ ಅರ್ಧದಷ್ಟು ಹಣವನ್ನು ಅಂದರೆ ಶೇ ೫೦%ರಷ್ಟನ್ನು ಅವರ ಸ್ವಂತ ಉಪಯೋಗಕ್ಕಾಗಿ ಅಂದರೆ ಕಾಫಿ, ಚಹಾ, ತಿಂಡಿ ತಿನಿಸುಗಳನ್ನು , ಅಂಚೆ ಕಾರ್ಡ್ಗಳು ಮುಂತಾದವುಗಳನ್ನು ಅಥವಾ ಅವರ ನಿಕಟ ಸಂಬಂದಿಗಳಿಗೆ ಆರ್ಜಿತ ಹಣವನ್ನು ಮನಿಯಾರ್ಡರ್ ಮೂಲಕ ಕುಳುಹಿಸಲು ಅನುಮಾತಿನಿಡಲಾಗುತ್ತಿದೆ ಮತ್ತು ಇನ್ನುಳಿದ ಶೇ ೫೦% ರಷ್ಟು ಹಣವನ್ನು ಅವರು ಬಿಡುಗಡೆ ಹೊಂದಿ ಹೋಗುವಾಗ ಒಟ್ಟಿಗೆ ಕೊಡಲಾಗುವುದು

ಕರ್ನಾಟಕ ಸರ್ಕಾರವು ಕಾರಾಗೃಹಗಳಲ್ಲಿನ ಬಂದಿಗಳಿಗೆ ಪ್ರಸ್ತುತ ಚಾಲ್ತಿಯಲ್ಲಿದ್ದ ಕೂಲಿಹಣವನ್ನು ಸರ್ಕಾರದ ಆದೇಶ ಸಂಖ್ಯೆ ಹೆಚ್‍ಡಿ 226 ಪಿಆರ್‍ಎ 2017, ದಿನಾಂಕ 04.04.2018ರಲ್ಲಿ ಪರಿಷ್ಕರಿಸಿ ಆದೇಶಿಸಲಾಗಿದೆ.ರಾಜ್ಯದ ಕಾರಾಗೃಹಗಳಲ್ಲಿ ಕೂಲಿ ಹಣ ಪಡೆಯುವ ಬಂದಿಗಳ ಈಗಿರುವ 03 ಪ್ರವರ್ಗಗಳನ್ನು ಮಾರ್ಪಡಿಸಿ, 04 ಪ್ರವರ್ಗಗಳನ್ನಾಗಿ ಅಂದರೆ ಕೌಶಲ್ಯ ರಹಿತ (Unskilled), ಅರೆ ಕೌಶಲ್ಯ (Semi Skilled), ನುರಿತ (Skilled) ಮತ್ತು ಹೆಚ್ಚು ನುರಿತ (Highly Skilled) ಎಂದು ವಿಂಗಡನೆ ಮಾಡಿ ಈ ಕೆಳಕಂಡಂತೆ ಕೂಲಿ ದರವನ್ನು ಹೆಚ್ಚಿಸಿ, ತಕ್ಷಣ ಜಾರಿಗೆ ಬರುವಂತೆ ಮತ್ತು ಮುಂದಿನ ಆದೇಶದವರೆಗೆ ಷರತ್ತುಗಳಿಗೊಳಪಟ್ಟು ಕೂಲಿ ದರ ನಿಗದಿಪಡಿಸಿ ಆದೇಶಿಸಿದೆ:

ಕ್ರ.ಸ ಬಂದಿಗಳ ವರ್ಗ ಚಾಲ್ತಿಯಲ್ಲಿರುವ ಕೂಲಿ ದರ ಪರಿಷ್ಕರಿಸಿ ನಿಗದಿಪಡಿಸಿದ ಕೂಲಿ ದರ
ಕೂಲಿ ದರ ರೂ. ಊಟ/ ಬಟ್ಟೆ/ ಖರ್ಚು ರೂ. ನಗದು ಪಾವತಿ ರೂ. ಕೂಲಿ ದರ ರೂ. ಊಟ/ ಬಟ್ಟೆ/ ಖರ್ಚು ರೂ. ನಗದು ಪಾವತಿ ರೂ.
1 ಕೌಶಲ್ಯ ರಹಿತ ಕೆಲಸಗಾರ ಬಂದಿ (Unskilled)) 70.00 40.00 30.00 175.00 100.00 75.00
2 ಅರೆ ಕೌಶಲ್ಯ ಕೆಲಸಗಾರ ಬಂದಿಗಳು (Semi Skilled) - - - 200.00 100.00 100.00
3 ನುರಿತ ಕೆಲಸಗಾರ ಬಂದಿಗಳು (Skilled) 80.00 40.00 40.00 225.00 100.00 125.00
4 ಹೆಚ್ಚುನುರಿತ ಕೆಲಸಗಾರ ಬಂದಿಗಳು (Highly Skilled) 90.00 40.00 50.00 250.00 100.00 150.00

ಈ ಮೇಲಿನ ದರಗಳಲ್ಲಿ ರೂಪಾಯಿ ೪೦/- ಬಂದಿಗಳ ಊಟ, ಬಟ್ಟೆ ಖರ್ಚು ಒಳಗೊಂಡಿದ್ದು, ಕ್ರಮವಾಗಿ ರೂ.೩೦, ರೂ.೪೦, ರೂ.೫೦ ಗಳನ್ನು ಪಾವತಿಸಲಾಗುತ್ತದೆ.

ಹಿಂದಿನಪುಟ | ಮುಂದಿನಪುಟ

ಹಕ್ಕುಗಳು ಇವರಿಂದ :ಇಲಾಖೆ ಕಾರಾಗೃಹ , ಇವರಿಂದ ಒದಗಿಸಲಾಗುತ್ತದೆ ಪರಿವಿಡಿ . ಕರ್ನಾಟಕ

ಕೊನೆಯ ನವೀಕರಣ: ೧೮ ನವೆಂಬರ್ ೨೦೧೪

© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ -೨೦೧೩.

ವೆಬ್ಸೈಟ್ ವಿನ್ಯಾಸ ಮತ್ತು ಹೋಸ್ಟ್