ಬಂದಿಗಳ ಆರೋಗ್ಯ

ಕಾರಾಗೃಹಗಳಲ್ಲಿ ಲಭ್ಯವಿರುವ ವೈದ್ಯಕೀಯ ಸೌಲಭ್ಯ ಎಲ್ಲ ಕೇಂದ್ರ ಕಾರಾಗೃಹಗಳಲ್ಲಿ ಹಾಗೂ ಕೆಲವೊಂದು ಜಿಲ್ಲಾ ಕಾರಾಗೃಹಗಳಲ್ಲಿ ಬಂದಿಗಳ ವೈದ್ಯಕೀಯ ತಪಾಸಣೆಗಾಗಿ ಪ್ರತ್ಯೇಕ ಆಸ್ಪತ್ರೆ ವಿಭಾಗ ಇರುತ್ತದೆ. ಈ ಆಸ್ಪತ್ರೆಗಳಲ್ಲಿ ಆರೋಗ್ಯ ಇಲಾಖೆಯಿಂದ ಪ್ರತಿನಿಯೋಜನಗೊಂಡ ವೈದ್ಯಾಧಿಕಾರಿಗಳು ಇರುತ್ತಾರೆ. ವೈದ್ಯಾಧಿಕಾರಿಗಳಿಗೆ ಸಹಕರಿಸಲು ಅರೆ ವೈದ್ಯಕೀಯ ಸಿಬ್ಬಂದಿಗಳಾದ ಫಾರ್ಮಾಸಿಸ್ಟ್, ಮೇಲ್ ನರ್ಸ್, ಲ್ಯಾಬ್ ಟೆಕ್ನೀಶಿಯನ್ಗಳು ಇರುತ್ತಾರೆ. ಈ ಆಸ್ಪತ್ರೆಗಳಲ್ಲಿ ಅವಶ್ಯವಿರುವ ವೈದ್ಯಕೀಯ ಉಪಕರಣಗಳಾದ ಎಕ್ಸ್‌ರೇ ಯಂತ್ರ, ಪ್ರಯೋಗಾಲಯದ ಉಪಕರಣಗಳು ಇಸಿಜಿ ಮುಂತಾದವುಗಳು ಲಭ್ಯವಿರುತ್ತವೆ. ಬಂದಿಗಳ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸೆಯನ್ನು ಕಾರಾಗೃಹದ ವೈದ್ಯಾಧಿಕಾರಿಗಳು ನೋಡಿಕೊಳ್ಳುತ್ತಾರೆ. ಹೆಚ್ಚಿನ / ಉನ್ನತ ಚಿಕಿತ್ಸೆ ಅಗತ್ಯವಿದ್ದಲಿ ಹೊರ ಆಸ್ಪತ್ರೆಗಳಿಗೆ ಜಿಲ್ಲಾ ತಾಲ್ಲೂಕು ವೈದ್ಯಾಧಿಕಾರಿಗಳು ಭೇಟಿ ನೀಡಿ ಚಿಕ್ಟ್ಸೆ ನೀಡುತ್ತಾರೆ.

ದಿನಾಂಕ ೩೧.೦೩.೨೦೧೭ ರಲ್ಲಿದ್ದಂತೆ ಕಾರಾಗೃಹಗಳ ಇಲಾಖೆಗೆ ಮಂಜೂರಾಗಿರುವ, ಕರ್ತವ್ಯ ನಿರ್ವಹಿಸುತ್ತಿರುವ ಹಾಗೂ ಖಾಲಿ ಇರುವ ವೈದ್ಯಕೀಯ ಅಧಿಕಾರಿ ಹಾಗೂ ವೈದ್ಯಕೀಯ ಸಿಬ್ಬಂದಿ ಅಂಕಿ ಅಂಶಗಳ ವಿವರ ಈ ಕೆಳಕಂಡಂತಿದೆ.

ಹುದ್ದೆಯ ಹೆಸರು ಮಂಜೂರಾಗಿರುವ ಹುದ್ದೆಗಳು ಕರ್ತವ್ಯ ನಿರ್ವಹಿಸುತ್ತಿರುವವರು ಖಾಲಿ ಇರುವ ಹುದ್ದೆ
ಅಸಿಸ್ಟಂಟ್ ಸರ್ಜನ್ ೨೦ ೦೭ ೧೩
ಮಾನಸಿಕ ತಜ್ಞರು ೦೨ ೦೧ ೦೧
ಫಾರ್ಮಾಸಿಸ್ಟ್ ೧೭ ೦೯ ೦೮
ಜೂನಿಯರ್ ಲ್ಯಾಬ್ ಟೆಕ್ನೀಶಿಯನ್ ೦೭ ೦೩ ೦೪
ಎಕ್ಸ್ ರೇ ಟೆಕ್ನೀಶಿಯನ್ ೦೪ ೦೨ ೦೨
ಮೇಲ್ ನರ್ಸ್ ೦೫ ೦೧ ೦೪
ಒಟ್ಟು ೫೫ ೨೩ ೩೨

ಆರೋಗ್ಯ ಶಿಬಿರಗಳು

ಸಾಮಾನ್ಯ ಆರೋಗ್ಯ, ಕಣ್ಣು, ಹಲ್ಲು ಮತ್ತು ಚರ್ಮಕ್ಕೆ ಸಂಬಂಧಿಸಿದ ಕಾಯಿಲೆಗಳ ಬಗ್ಗೆ ಉಚಿತ ವೈದ್ಯಕೀಯ ಶಿಬಿರಗಳನ್ನು ಎಲ್ಲ ಮುಖ್ಯ ಕಾರಾಗೃಹದಲ್ಲಿ ಸರ್ಕಾರೇತರ ಸಂಘ ಸಂಸ್ಥೆಗಳ ಮೂಲಕ ಅಂದರೆ ರೆಡ್‌ಕ್ರಾಸ್ ಸೊಸೈಟಿ, ರೋಟರಿ, ಲಯನ್ಸ್ ಕ್ಲಬ್ ಮತ್ತು ಪ್ರಿಸನ್ಸ್ ಮಿನಿಸ್ಟ್ರಿ ಇಂಡಿಯಾ ಹಾಗೂ ಇತರೆ ಸ್ವಯಂ ಸೇವಾ ಸಂಸ್ಥೆಗಳ ಮೂಲಕ ಪ್ರತ್ಯೇಕ ಸಂದರ್ಭಗಳ ನಡೆಸಲಾಗುತ್ತಿದೆ.

ವರದಿಯ ವರ್ಷದಲ್ಲಿ ವಿವಿಧ ಕಾರಾಗೃಹಗಳಲ್ಲಿ ನಡೆದ ವೈದ್ಯಕೀಯ ಚಿಕಿತ್ಸಾ ಶಿಬಿರಗಳ ವಿವರ ಈ ಕೆಳಕಂಡಂತೆ ಇವೆಃ

  • ಮೈಸೂರು ಕೇಂದ್ರ ಕಾರಾಗೃಹದಲ್ಲಿ ಜೀವನಾಧಾರ ಬ್ಲಡ್ ಬ್ಯಾಂಕ್, ಮೈಸೂರು ಇವರ ವತಿಯಿಂದ ಬಂದಿಗಳ ರಕ್ತ ಪರೀಕ್ಷೆ ಹಾಗೂ ರಕ್ತದಾನ ಶಿಬಿರ ಆಯೋಜಿಸಲಾಗಿರುತ್ತದೆ
  • ರೋಟರೀ ಕ್ಲಬ್ ಮತ್ತು ಇನ್ನರ್ ವೀಲ್ ಕ್ಲಬ್ ದಾವಣಗೆರೆ ಇವರುಗಳ ಸಂಯುಕ್ತಾಶ್ರಯದಲ್ಲಿ ವಿಶೇಷ ಉಪಕರಗೃಹ ದಾವಣಗೆರೆಯಲ್ಲಿ ಉಚಿತ ದಂತ ತಪಾಸಣಾ ಶಿಬಿರ ಹಾಗೂ ರಕ್ತ ತಪಾಸಣಾ ಶಿಬಿರವನ್ನು ಆಯೋಜಿಸಲಾಯಿತು.
  • ಮೈಸೂರು ಜಿಲ್ಲಾಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಮೈಸೂರು ಕೇಂದ್ರ ಕಾರಾಗೃಹದಲ್ಲಿ ಬಂದಿಗಳಿಗಾಗಿ ಕಣ್ಣಿನ ತಪಾಸಣಾ ಶಿಬಿರವನ್ನು ಆಯೋಜಿಸಲಾಯಿತು. ದೃಷ್ಟಿ ದೋಷವಿದ್ದ ಒಟ್ಟು ೩೭೬ ಬಂದಿಗಳಿಗೆ ಉಚಿತವಾಗಿ ಕನ್ನಡಕಗಳನ್ನು ವಿತರಿಸಲಾಯಿತು

ಹಿಂದಿನಪುಟ | ಮುಂದಿನಪುಟ

ಹಕ್ಕುಗಳು ಇವರಿಂದ :ಇಲಾಖೆ ಕಾರಾಗೃಹ , ಇವರಿಂದ ಒದಗಿಸಲಾಗುತ್ತದೆ ಪರಿವಿಡಿ . ಕರ್ನಾಟಕ

ಕೊನೆಯ ನವೀಕರಣ: ೧೮ ನವೆಂಬರ್ ೨೦೧೪

© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ -೨೦೧೩.

ವೆಬ್ಸೈಟ್ ವಿನ್ಯಾಸ ಮತ್ತು ಹೋಸ್ಟ್