ಕಟ್ಟಡಗಳು
ಕಾರಾಗೃಹಗಳ ಕಟ್ಟಡಗಳು ಹಾಗೂ ಸಿಬ್ಬಂದಿ ವಸತಿಗೃಹಗಳ ದುರಸ್ತಿ, ಜೀರ್ಣೋದ್ಧಾರ ಹೆಚ್ಚುವರಿ ಮಾರ್ಪಾಡು ಇತ್ಯಾದಿಗಳ ದುರಸ್ತಿ ಕಾಮಗಾರಿಗಳನ್ನು ಕೈಗೊಳ್ಳುವ ಸಲುವಾಗಿ ಲೋಕೋಪಯೋಗಿ ಇಲಾಖೆ ಲೆಕ್ಕ ಶೀರ್ಷಿಕೆಯಡಿ ಅನುದಾನ ಪಡೆದುಕೊಳ್ಳಲು ಪ್ರಯತ್ನಗಳು ಮುಂದುವರೆದಿವೆ.
2019-20ನೇ ಸಾಲಿನ ವಾರ್ಷಿಕ ಕ್ರಿಯಾ ಯೋಜನೆ
ಲೆಕ್ಕಶೀರ್ಷಿಕೆ ಯೋಜನಾ ವಿವರ:- 4059-80-051-0-03-132 ಬಂಡವಾಳ ವೆಚ್ಚಗಳು
ಕ್ರ. ಸಂ. | ಯೋಜನೆಗಳು | ಮೊತ್ತ |
---|---|---|
1 |
ಮುಂದುವರೆದ ಕಾಮಗಾರಿಗಳು:2017-18ನೇ ಸಾಲಿನಲ್ಲಿ ಬೆಂಗಳೂರು ಕೇಂದ್ರ ಕಾರಾಗೃಹದ ಆವರಣದಲ್ಲಿ 3ನೇ ಹಂತದ ವಿವಿಧ ಕಾಮಗಾರಿಗಳು |
646.00 |
2 | 2015-16ನೇ ಸಾಲಿನಲ್ಲಿ ಕಡೂರು ಬಯಲು ಬಂದೀಖಾನೆ ನಿರ್ಮಾಣಕ್ಕೆ ಕಾಯ್ದಿರಿಸಲಾಗಿರುವ ಜಮೀನಿನ ಸುತ್ತ ಕಾಂಪೌಂಡ್ ಗೋಡೆ ನಿರ್ಮಾಣ | 200.00 |
3 | 2016-17ನೇ ಸಾಲಿನಲ್ಲಿ ಹಳಿಯಾಳ ನೂತನ ಉಪಕಾರಾಗೃಹ ನಿರ್ಮಾಣ | 36.25 |
4 | 2017-18ನೇ ಸಾಲಿನಲ್ಲಿ ಹರಪ್ಪನಹಳ್ಳಿ ನೂತನ ಉಪಕಾರಾಗೃಹದ ಜಮೀನಿನ ಸುತ್ತ ಕಾಂಪೌಂಡ್ ಗೋಡೆ ನಿರ್ಮಾಣ | 30.00 |
5 | 2016-17ನೇ ಸಾಲಿನಲ್ಲಿ ಮಂಗಳೂರು ನೂತನ ಕೇಂದ್ರ ಕಾರಾಗೃಹದ ಜಮೀನಿನ ಸುತ್ತ ಕಾಂಪೌಂಡ್ ಗೋಡೆ ನಿರ್ಮಾಣ | 11.26 |
ಮುಂದುವರಿದ ಯೋಜನೆಯ ಒಟ್ಟು |
932.32 | |
1 |
ನೂತನ ಯೋಜನೆಗಳು:ಬೆಂಗಳೂರು ಕೇಂದ್ರ ಕಾರಾಗೃಹದ ಆವರಣದಲ್ಲಿ ಅತ್ಯಾಧುನಿಕ ಮಾದರಿಯ ಹೈ-ಸೆಕ್ಯೂರಿಟಿ ಜೈಲ್ ನಿರ್ಮಾಣ |
3000.00 |
2 | ಬೆಂಗಳೂರಿನ ಗಾಂಧಿನಗರದಲ್ಲಿರುವ “Karnataka Academy of Prisons and Correctional Services Bengaluru” ಕಟ್ಟಡದ 2ನೇ ಹಂತದ ಕಾಮಗಾರಿ | 251.49 |
ನೂತನ ಯೋಜನೆಯ ಒಟ್ಟು | 3251.49 | |
ಮುಂದುವರಿದ ಹಾಗೂ ನೂತನ ಯೋಜನೆಗಳ ಒಟ್ಟು | 4175.00 |
ಲೆಕ್ಕಶೀರ್ಷಿಕೆವಾರು ಯೋಜನಾ ವಿವರ:- 4059-80-051-0-13-386 ನೂತನ ಕಾರಾಗೃಹ ನಿರ್ಮಾಣ
ಕ್ರ. ಸಂ. | ಯೋಜನೆಗಳು | ಮೊತ್ತ |
---|---|---|
1 | ವಿಜಯಪುರ ನೂತನ ಕೇಂದ್ರ ಕಾರಾಗೃಹ ನಿರ್ಮಾಣ | 900.00 |
2 | ಬೀದರ್ ನೂತನ ಕೇಂದ್ರ ಕಾರಾಗೃಹ ನಿರ್ಮಾಣ | 900.00 |
3 | ಹಾಸನ ನೂತನ ಕೇಂದ್ರ ಕಾರಾಗೃಹ ನಿರ್ಮಾಣ | 900.00 |
4 | ಅರಸೀಕೆರೆ ನೂತನ ಉಪಕಾರಾಗೃಹ ನಿರ್ಮಾಣ | 300.00 |
ನೂತನ ಯೋಜನೆಗಳ ಒಟ್ಟು ವೆಚ್ಚ | 3000.00 |
2019-20ನೇ ಸಾಲಿನ ಲೆಕ್ಕ ಶೀರ್ಷಿಕೆ 2059-80-051-0-08-200 ನಿರ್ವಹಣಾ ವೆಚ್ಚ
ಕ್ರ. ಸಂ. | ಯೋಜನೆಗಳು | ಮೊತ್ತ |
---|---|---|
1 | ಕಾರಾಗೃಹ ಇಲಾಖೆಯ ಪ್ರಧಾನ ಕಛೇರಿಯಲ್ಲಿ ಹೆಚ್ಚುವರಿ ಕಾಮಗಾರಿಗಳು | 101.80 |
ನೂತನ ಕಾಮಗಾರಿಗಳು: | 101.80 |
2019-20ನೇ ಸಾಲಿನ ಲೆಕ್ಕಶೀರ್ಷಿಕೆ 4216-01-700-02-10 386 ವಸತಿಗೃಹಗಳ ನಿರ್ಮಾಣ
ಕ್ರ. ಸಂ. | ಯೋಜನೆಗಳು | ಮೊತ್ತ |
---|---|---|
1 |
ಮುಂದುವರಿದ ಕಾಮಗಾರಿ:2014-15ನೇ ಸಾಲಿನಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಕಾರಾಗೃಹದ 24 ಸಂಖ್ಯೆ ಸಿಬ್ಬಂದಿ ವಸತಿಗೃಹ ನಿರ್ಮಾಣ |
132.28 |
2 | 2017-18ನೇ ಸಾಲಿನಲ್ಲಿ ಹಳಿಯಾಳ ನೂತನ ಉಪಕಾರಾಗೃಹದ ವಸತಿಗೃಹಗಳ ನಿರ್ಮಾಣ | 86.72 |
3 |
ನೂತನ ಕಾಮಗಾರಿ:ಮಡಿಕೇರಿ ಜಿಲ್ಲಾ ಕಾರಾಗೃಹದ ಸಿಬ್ಬಂದಿಗಳಿಗೆ ವಸತಿಗೃಹ ನಿರ್ಮಾಣ |
100.00 |
ಒಟ್ಟು | 319.00 |
ಶಿವಮೊಗ್ಗ ಮಹಿಳಾ ಕೇಂದ್ರ ಕಾರಾಗೃಹ :
ಅಧಿಸೂಚನೆ ಸಂಖ್ಯೆ: ಹೆಚ್ಡಿ 65 ಪಿಆರ್ಎ 2018, ದಿನಾಂಕ: 21.03.2019ರಲ್ಲಿ ಘೋಷಿಸಲಾದ ಶಿವಮೊಗ್ಗ ಕೇಂದ್ರ ಕಾರಾಗೃಹದ ಆವರಣದಲ್ಲಿರುವ ಮಹಿಳಾ ವಿಭಾಗವನ್ನು ಕರ್ನಾಟಕ ಕಾರಾಗೃಹ ಕಾಯ್ದೆ 1963ರ ಅಧ್ಯಾಯ-1ರ ಉಪಕಾಯ್ದೆ-ಜೆ ರನ್ವಯ “ಶಿವಮೊಗ್ಗ ಮಹಿಳಾ ಕೇಂದ್ರ ಕಾರಾಗೃಹ”ವೆಂದು ಘೋಷಿಸಿದೆ. ಅದರಂತೆ ತುಮಕೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಹಿಳಾ ಕೇಂದ್ರ ಕಾರಾಗೃಹವನ್ನು ಶಿವಮೊಗ್ಗಕ್ಕೆ ಸ್ಥಳಾಂತರಿಸಲಾಗಿದೆ.
ಬೆಂಗಳೂರು ಕೇಂದ್ರ ಕಾರಾಗೃಹದ ಆವರಣದಲ್ಲಿ ಎರಡು ಪ್ರತ್ಯೇಕ ಕಾರಾಗೃಹಗಳ ನಿರ್ಮಾಣ ಮಾಡುವ ಬಗ್ಗೆಃ
ಬಂದಿಗಳಿಗೆ ಹೆಚ್ಚಿನ ಸ್ಧಳಾವಕಾಶ ಕಲ್ಪಿಸಿಕೊಡುವ ದೃಷ್ಟಿಯಿಂದ ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ಎರಡು ಪ್ರತ್ಯೇಕ ಕಾರಾಗೃಹಗಳ (ಸಜಾ ಮತ್ತು ಮಹಿಳಾ ಕಾರಾಗೃಹ)ನಿರ್ಮಾಣಕ್ಕೆ ಸರ್ಕಾರವು ಆದೇಶ ಸಂಖ್ಯೆ: ಹೆಚ್ಡಿ 251 ಪಿಆರ್ಎ2010 ದಿನಾಂಕ:25.2.2011 ರಲ್ಲಿ ಆಡಳಿತಾತ್ಮಕ ಮಂಜೂರಾತಿ ನೀಡಿ ಕಾಮಗಾರಿಯು ಮುಕ್ತಾಯ ಹಂತದಲ್ಲಿರುತ್ತದೆ.
ಕಾರಾಗೃಹಗಳನ್ನು ನಗರದ ಹೊರ ವಲಯಕ್ಕೆ ಸ್ಧಳಾಂತರಿಸುವ ಬಗ್ಗೆಃ
ಮಂಗಳೂರು, ವಿಜಯಪುರ ಹಾಗೂ ಬೀದರ್ ಕಾರಾಗೃಹಗಳನ್ನು ನಗರದ ಹೊರವಲಯಕ್ಕೆ ಸ್ಧಳಾಂತರಿಸುವ ದಿಶೆಯಲ್ಲಿ ಅಗತ್ಯ ಭೂಮಿಯು ಮಂಜೂರಾಗಿರುತ್ತದೆ. ವಿವರ ಕೆಳಕಂಡಂತಿದೆ:
ಸ್ಧಳ | ಮಂಜೂರಾದ ಜಮೀನಿನ ವಿಸ್ತೀರ್ಣ |
---|---|
1. ಕೇಂದ್ರ ಕಾರಾಗೃಹ ಬಿಜಾಪುರ | 40.00 ಎಕರೆ |
2. ಜಿಲ್ಲಾ ಕಾರಾಗೃಹ ಮಂಗಳೂರು | 63.89 ಎಕರೆ |
3. ಜಿಲ್ಲಾ ಕಾರಾಗೃಹ ಬೀದರ್ | 49.00 ಎಕರೆ |
4. ತಾಲ್ಲೂಕು ಉಪ ಕಾರಾಗೃಹ, ಸಾಗರ | 9.36 ಎಕರೆ |
ಕಾರಾಗೃಹಗಳನ್ನು ಸ್ಧಳಾಂತರಿಸಲು ನೂತನವಾಗಿ ಕಟ್ಟಡ ನಿರ್ಮಾಣಕ್ಕೆ ಗುರುತಿಸಲಾಗಿರುವ ಜಮೀನಿನ ಮಾಹಿತಿ/ ಜಮೀನುಗಳು ಸಂಬಂಧಿಸಿದ ಇಲಾಖೆಗಳಿಂದ ಮಂಜೂರಾಗಬೇಕಾಗಿದ್ದು ಈ ನಿಟ್ಟಿನಲ್ಲಿ ಈ ಇಲÁಖೆಯಿಂದ ಅಗತ್ಯ ಕ್ರಮ ಜರುಗಿಸಲಾಗಿದೆ.
- ಜಿಲ್ಲಾ ಕಾರಾಗೃಹ, ಗದಗ.
- ವಿಶೇಷ ಉಪ ಕಾರಾಗೃಹ, ಕೆ.ಜಿ.ಎಫ್.
- ಜಿಲ್ಲಾ ಕಾರಾಗೃಹ, ಕಾರವಾರ.
- ತಾಲ್ಲೂಕು ಉಪ ಕಾರಾಗೃಹ, ಸೇಡಂ.
- ಜಿಲ್ಲಾ ಕಾರಾಗೃಹ, ರಾಯಚೂರು.
- ಕೇಂದ್ರ ಕಾರಾಗೃಹ, ಮೈಸೂರು.
- ತಾಲ್ಲೂಕು ಉಪ ಕಾರಾಗೃಹ, ಕೊಳ್ಳೇಗಾಲ.
ನೂತನ ಕಟ್ಟಡಗಳು



