ನಾಗರಿಕ ಸನ್ನದು

ಇಲಾಖೆಯಲ್ಲಿ ಸಾಮಾನ್ಯವಾಗಿ ಸಾರ್ವಜನಿಕರ/ ನಾಗರಿಕರ ಸಂಪರ್ಕ ಅತ್ಯಂತ ವಿರಳವಾಗಿದ್ದು ನಾಗರಿಕ ಹಕ್ಕುಗಳ ಕುರಿತಾಗಿ ಕಾರಾಗೃಹಗಳಾಧಿಕಾರಿ ಹಾಗೂ ಸಿಬ್ಬಂದಿಗಳ ಕರ್ತವ್ಯ ಮತ್ತು ಹೊಣೆಗಾರಿಕೆಗಳನ್ನು ಈ ಕೆಳಕಂಡಂತೆ ನಿಗದಿಪಡಿಸಿಕೊಳ್ಳಲಾಗಿದೆ.

  • ಯಾವ ವ್ಯಕ್ತಿ ಕುಟುಂಬದ ಸದಸ್ಯರು ಹಾಗೂ ಹತ್ತಿರ ಸಂಬಂದಿಗಳು ಕಾರಾಗೃಹ ವಾಸದ ಶಿಕ್ಷೆಗೆ ಗುರಿಯಾಗಿದ್ದಲಿ ಸಂಬಂಧಿಸಿದ ವ್ಯಕ್ತಿಯು ಕಾರಾಗೃಹದ ಅಧಿಕಾರಿಯಲ್ಲಿ ಸೂಕ್ತ ಪುರಾವೆಗಳೊಂದಿಗೆ ಆ ಬಂದಿಯ ಬಂಧನದ ಅವಧಿ / ಕಾರಾಗೃಹವಾಸದ ಕುರಿತಾದ ಮಾಹಿತಿಗಳನ್ನು ಪಡೆದುಕೊಳ್ಳಬಹುದಾಗಿರುತ್ತದೆ.
  • ವ್ಯಕ್ತಿಯು ನ್ಯಾಯಾಂಗ ಬಂಧನಕ್ಕೆ ಗುರಿಯಾಗಿ ಕಾರಾಗೃಹಕ್ಕೆ ಪ್ರವೇಶ ಹೊಂದಿದ ನಂತರ ಅಧಿಪತ್ರದಲ್ಲಿ ಉಲ್ಲೇಖಿಸಿರುವ ಘನ ನ್ಯಾಯಾಲಯದ ಆದೇಶ ಹಾಗೂ ನಿರ್ದೇಶನದಂತೆ ಬಂಧನದಲ್ಲಿದಲಾಗುವ ಬಗ್ಗೆ ಮಾಹಿತಿ ನೀಡಲಾಗುವುದು
  • ವಿಚಾರಣಾ ಬಂದಿಗಳು ಕಾರಾಗೃಹದಲ್ಲಿ ತಮ್ಮದೇ ಆದ ಬಟ್ಟೆ ಬರೆಗಳನ್ನು ಧರಿಸಲು ಅನುಮತಿವುಳ್ಳವರಾಗಿರುತ್ತಾರೆ. ಒಂದು ವೇಳೆ ಅವರು ಆಶಕ್ತರಾದಲ್ಲಿ ಸರ್ಕಾರದ ವೆಚ್ಚದಲ್ಲಿ ಬಟ್ಟೆ ಮತ್ತು ಹಾಸಿಗೆ ಹೊದಿಕೆಯನ್ನು ಒದಗಿಸಲಾಗುವುದು
  • ವಿಚಾರಣಾ ಬಂದಿಗಳಿಗೆ / ಸಜಾ ಬಂದಿಗಳಿಗೆ ಅರ್ಹವಿರುವಃ ಸಮಾಯೋಜಿತ ಹಾಗೂ ಅಧಿಕಾರಿಯ ಉಸ್ತುವಾರಿಯಲ್ಲಿ ಹತ್ತಿರದ ಸಂಬಂಧಿಗಳೊಡನೆ, ಸ್ನೇಹಿತರು ಅಥವಾ ಕಾನೂನು ಸಲಹೆಗಾರರೊಡನೆ ಮಾತನಾಡಲು ಅಥವಾ ಪತ್ರ ಮುಖೇನ ಸಂಪರ್ಕಿಸಲು ಅವಕಾಶ ನೀಡಲಾಗುವುದು. ಸಂದರ್ಶನ ನೀಡ ಬಯಸುವ ಬಂದಿಯ ಸಂಬಂದಿಗಳು, ಸ್ನೇಹಿತರು ಹಾಗೂ ಕಾನೂನು ಸಲಹೆಗಾರರು ಸಂಬಂದಿಸಿದ ಕಾರಾಗೃಹದ ಅಧೀಕ್ಷಕರನ್ನು ಅಥವಾ ನೇಮಿಸಲ್ಪಟ್ಟ ಸೂಕ್ತ ಕಾರಾಗೃಹದ ಅಧಿಕಾರಿಯನ್ನು ಮೌಖಿಕವಾಗಿ ಅಥವಾ ಬರವಣಿಗೆಯ ರೂಪದಲ್ಲಿ (ಮನವಿ ಪತ್ರ ಕೋರಿ) ಅವರ ಅನುಮತಿ ಪಡೆದುಕೊಳ್ಳತಕ್ಕದ್ದು.
  • ವ್ಯಕ್ತಿ ಸಂಸ್ಥೆಗಳ, ಸರ್ಕಾರೇತರ ಸಂಘ ಸಂಸ್ಥೆಗಳು ಹಾಗೂ ಖಾಸಗಿ ಉದ್ದಿಮೆದಾರರು ಬಂಡಿಗಳ ಪುನರ್ವಸ್ತಿಗಾಗಿ ವೃತ್ತಿಪರ ಕೋರ್ಸ್‌ಗಳಲ್ಲಿ ತರಬೇತಿ ನೀಡಲು ಆಸಕ್ತರಾಗಿದ್ದಲ್ಲಿ ಅಂತಹವರು ಸಂಬಂದಿಸಿದ ಕಾರಾಗೃಹದ ಅಧೀಕ್ಷಕರನ್ನು ಸಂಪರ್ಕಿಸಿ ಅವರ ಮಾರ್ಗದರ್ಶನದಲ್ಲಿ ಅರ್ಹ ಬಂದಿಗಳಿಗೆ ವಿವಿಧ ವೃತ್ತಿ ಪರ ಕೋರ್ಸ್‌ಗಳಲ್ಲಿ ತರಬೇತಿ ನೀಡಿ ಬಿಡುಗಡೆ ನಂತರ ಸೂಕ್ತ ಉದ್ಯೋಗವನ್ನು ಒದಗಿಸಿಕೊಡಬಹುದಾಗಿದೆ.
  • ಕಾರಾಗೃಹವಾಸದಲ್ಲಿರುವ ಬಂದಿಗಳ ಮಕ್ಕಳಿಗೆ ಉಚಿತ ಶಿಕ್ಷಣವನ್ನು ನೀಡಲು ಮುಂದೆ ಬರುವ ನೋಂದಾಯಿತ ಸಂಸ್ಥೆಗಳು ಸಂಬಂಧಿಸಿದ ಕಾರಾಗೃಹದ ಅಧೀಕ್ಷಕರನ್ನು ಸಂಪರ್ಕಿಸಿ ಆ ನಿಟ್ಟಿನಲ್ಲಿ ಸೌಲಭ್ಯ ಕಲ್ಪಿಸಿಕೊಡಲು ಅವಕಾಶವಿರುತ್ತದೆ
  • ಮಹಿಳಾ ಬಂದಿಗಳಿಂದ ಬೇರ್ಪಟ್ಟ ಅಥವಾ ಪ್ರತ್ಯೇಕ ಹೊಂದಿದ ಬಂದಿಗಳ ಮಕ್ಕಳನ್ನು ಪೋಷಣೆ ಮಾಡಿ, ವಿದ್ಯಾಭ್ಯಾಸ ನೀಡಲು ಆಸಕ್ತಿ ಹೊಂದಿ ಮುಂದೆ ಬರುವ ಅರ್ಹ ಸಂಸ್ಥೆಗಳು ಸಂಬಂದಿಸಿದ ಕಾರಾಗೃಹದ ಅಧೀಕ್ಷಕರನ್ನು ಸಂಪರ್ಕಿಸಿ ಆ ನಿಟ್ಟಿನಲ್ಲಿ ಸೌಲಭ್ಯ ಕಲ್ಪಿಸಿಕೊಡಲು ಅವಕಾಶವಿರುತ್ತದೆ.
  • ಬಂದಿಗಳ ಮನೋಭಿವೃದ್ಧಿ ಹಾಗೂ ಮನೋಸ್ಟೈರ್ಯವನ್ನು ಹೆಚ್ಚಿಸುವ ಮತ್ತು ಮನಃಪರಿವರ್ತನೆ ಮಾಡಲು ಆಸಕ್ತ ಧಾರ್ಮಿಕ ಸಂಸ್ಥೆಗಳು ಕಾರಾಗೃಹದ ಅಧೀಕ್ಷಕರ ಪೂರ್ವಾನುಮತಿ ಪಡೆದು ಕಾರಾಗೃಹದಲ್ಲಿ ಪ್ರಾರ್ಥನೆ, ಭಜನೆ ಹಾಗೂ ನೈತಿಕ ಶಿಕ್ಷಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಅವಕಾಶವಿರುತ್ತದೆ.

ಕುಂದು ಕೊರತೆ ನಿವಾರಣೆ ವ್ಯವಸ್ಥೆ.

ಸಾರ್ವಜನಿಕರು ಕುಂದು ಕೊರತೆ ಏನೇ ಇದ್ದಲ್ಲಿ ಅದನ್ನು ಸಂಬಂದಿಸಿದ ಕಾರಾಗೃಹದ ಅಧೀಕ್ಷಕರಿಗೆ ಮೌಖಿಕವಾಗಿ ಅಥವಾ ಪತ್ರ ಮುಖೇನ ದೂರನ್ನು ನೀಡಬಹುದಾಗಿದೆ

ಕಚೇರಿಯ ವೇಳೆ: ಬೆಳಗ್ಗೆ: ೧೦ ರಿಂದ ಸಂಜೆ ೫.೩೦ ರವರೆಗೆ. ಸೋಮವಾರದಿಂದ ಶನಿವಾರದವರೆಗೆ (ಎರೆಡನೆ ಶನಿವಾರ ಹೊರತುಪಡಿಸಿ)

ಪ್ರತಿ ಕಾರಾಗೃಹದಲ್ಲಿ ಕುಂದು ಕೊರತೆ ನಿವಾರಣೆಗಾಗಿ ದೂರು ನಿವಾರಣಾ ಅಧಿಕಾರಿಗಳ ಮಾಹಿತಿ ಹೆಸರು, ಹುದ್ದೆ ಕಚೇರಿ ದೂರವಾಣಿ ಹಾಗೂ ಮೊಬೈಲ್ ಸಂಖ್ಯೆ ಇತ್ಯಾದಿ ಮಾಹಿತಿಗಳನ್ನು ಆಯಾ ಕಾರಾಗೃಹದ ಮುಖ್ಯದ್ವಾರದ ಬಳಿಯಲ್ಲಿ ನಮೂದಿಸಲಾಗಿರುತ್ತದೆ.

ಹಿಂದಿನಪುಟ | ಮುಂದಿನಪುಟ

ಹಕ್ಕುಗಳು ಇವರಿಂದ :ಇಲಾಖೆ ಕಾರಾಗೃಹ , ಇವರಿಂದ ಒದಗಿಸಲಾಗುತ್ತದೆ ಪರಿವಿಡಿ . ಕರ್ನಾಟಕ

ಕೊನೆಯ ನವೀಕರಣ: ೧೮ ನವೆಂಬರ್ ೨೦೧೪

© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ -೨೦೧೩.

ವೆಬ್ಸೈಟ್ ವಿನ್ಯಾಸ ಮತ್ತು ಹೋಸ್ಟ್