ಶಿಕ್ಷಣ ಮತ್ತು ವಾಚನಾಲಯ ಸೌಲಭ್ಯ
ಅನಕ್ಷರಸ್ತ ಬಂದಿಗಳನ್ನು ಅಕ್ಷರಸ್ತರನ್ನಾಗಿ ಮಾಡಲು ವಯಸ್ಕರ ಶಿಕ್ಷಣ ಪದ್ದತಿಯು ಜಾರಿಯಲ್ಲಿದೆ ಹಾಗೂ ಇದಕ್ಕಾಗಿ ಶಿಕ್ಷಣ ಇಲಾಖೆಯಿಂದ ಎರವಲು ಪಡೆದ ನುರಿತ ಶಿಕ್ಷ್ಕಾರಿರುತ್ತಾರೆ. ಬಂದಿಗಳು ಹೆಚ್ಚಿನ ವ್ಯಾಸಂಗವನ್ನು ಮಾಡಲು ಇಚ್ಚೇಸಿದ್ದಲ್ಲಿ ಮೈಸೂರು/ ಬೆಂಗಳೂರು/ ಧಾರವಾಡ ಮುಕ್ತ ವಿಶ್ವವಿದ್ಯಾಲಯ ಹಾಗೂ ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ ನವದೆಹಲಿ ಈ ಸಂಸ್ಥೆಗಳ ಮೂಲಕ ಪ್ರವೇಶ ಪಡೆಯಲು ಮುಕ್ತ ಅವಕಾಶವನ್ನು ಕಲ್ಪಿಸಿಕೊಡಲಾಗಿದೆ ಹಾಗೂ ಇದಕ್ಕಾಗಿ ತಗಲುವ ವೆಚ್ಚವನ್ನು ಇಲಾಖೆಯೇ ಭರಿಸುತ್ತದೆ
ಪ್ರಸಕ್ತ ಸಾಲಿನಲ್ಲಿ ಈ ಕೆಳಕಂಡಂತೆ ವಿವಿಧ ಕೋರ್ಸ್ಗಳಲ್ಲಿ ವ್ಯಾಸಂಗವನ್ನು ಮುಂದುವರಿಸಲು ಬಂದಿಗಳಿಗೆ ಅನುಮತಿಯನ್ನು ನೀಡಲಾಗಿದೆ. ಆಯಾ ವ್ಯಾಸಂಗಕ್ಕೆ ತಗಲುವ ಪ್ರವೇಶ ಶುಲ್ಕ ಮತ್ತು ಪರೀಕ್ಷಾ ಶುಲ್ಕವನ್ನು ಇಲಾಖೆ ಭರಿಸಿದೆ.
ಕೇಂದ್ರ ಕಾರಾಗೃಹ ಬೆಂಗಳೂರು, ಬೆಳ್ಗಾಂ, ಬಳ್ಳಾರಿ, ಗುಲ್ಬರ್ಗ, ಮೈಸೂರು ಬಿಜಾಪೂರಗಳಲ್ಲಿ ಹಾಗೂ ಬಯಲು ಬಂಧಿಖಾನೆ, ಕೋರಮಂಗಲದಲ್ಲಿ ಕೇಂದ್ರ ಗ್ರಂಥಾಲಯದ ತನ್ನ ಶಾಖೆಗಳನ್ನು ತೆರೆದಿವೆ. ಈ ಗ್ರಂಥಾಲಯಗಳಲ್ಲಿ ಮನೋರಂಜನೆ ಹಾಗೂ ವ್ಯಕ್ತಿತ್ವ ನಿರ್ಮಾಣ ಮಾಡುವಂತಹ ಪುಸ್ತಕಗಳು ಲಭ್ಯವಿರುತ್ತವೆ. ಬಂದಿಗಳಿಗೆ ಗ್ರಂಥಾಲಯದ ಸೌಲಭ್ಯ ಪಡೆದುಕೊಳ್ಳಲು ಅನುವು ಮಾಡಿಕೊಡಲಾಗಿದೆ.
ಕ್ರ. ಸಂ. | ಕಾರಾಗೃಹ | ಕೋರ್ಸಿನ ಹೆಸರು | ಬಂದಿಗಳ ಸಂಖ್ಯೆ | ಇಲಾಖೆ ಭರಿಸಿದ ಪ್ರವೇಶಾತಿ ಶುಲ್ಕ ರೂ.ಗಳಲ್ಲಿ |
---|---|---|---|---|
1 | ಕೇಂದ್ರ ಕಾರಾಗೃಹ, ಮೈಸೂರು | ಬಿ.ಎ-II, III | ೦೬ | ೯೨೦೦.೦೦ |
2 | ಕೇಂದ್ರ ಕಾರಾಗೃಹ, ಬೆಳಗಾವಿ | ಬಿ.ಎ-II, III | ೦೪ | ೪೦೦೦.೦೦ |
3 | ಕೇಂದ್ರ ಕಾರಾಗೃಹ, ಬಳ್ಳಾರಿ | ಬಿ.ಎ-II, III | ೦೬ | ೯೨೦೦.೦೦ |
ಮ್ ಸಿ ಜೆ | ೦೧ | |||