ಇಂಗ್ಲೀಷ್ | ಕನ್ನಡ
ಜೈಲು ಉತ್ಪನ್ನಗಳ ಖರೀದಿ - ಪ್ರೋತ್ಸಾಹಿಸಿ ನಮ್ಮ ಪ್ರಯತ್ನ
ಸುದ್ದಿ ಮತ್ತು ಅಪ್ಡೇಟ್ ಗಳು

ಸ್ವಾಗತ

ಕರ್ನಾಟಕ ಕಾರಾಗೃಹ ಮತ್ತು ಸುಧಾರಣಾ ಸೇವೆ ಇಲಾಖೆಯ ಮಾಹಿತಿ ಜಾಲತಾಣಕ್ಕೆ ನಿಮಗೆ ಸ್ವಾಗತ. ಈ ಮಾಹಿತಿ ಜಾಲತಾಣದ ಮೂಲಕ ನಾವು ನಿಮಗೆ ರಾಜ್ಯದ ಕಾರಾಗೃಹ ಮತ್ತು ಕಾರಾಗೃಹಗಳ ಸಂಬಂಧಿತ ಮಾಹಿತಿಗಳನ್ನು ಪ್ರಕಟಿಸಿದ್ದೇವೆ. ಈ ಮಾಹಿತಿ ಜಾಲತಾಣವು ಸಂಪೂರ್ಣವಾಗಿ ನಿಮ್ಮ ನಿರೀಕ್ಷೆ ಪೂರೈಸುತ್ತದೆ ಎಂದು ನಾವು ಭಾವಿಸಿದ್ದೇವೆ.

ಈ ಮಾಹಿತಿ ಜಾಲತಾಣವು ಕಾರಾಗೃಹದಲ್ಲಿರುವ ವಿವಿಧ ವಿಭಾಗಗಳ ಮಾಹಿತಿಯನ್ನು ಒಳಗೊಂಡಿದೆ. ಕೈದಿಗಳ ವಿವಿಧ ವಿಭಾಗಗಳು, ಪರಿವರ್ತನಾ ಕ್ರಮಗಳು, ಸುಧಾರಣಾ ಮತ್ತು ಕೈದಿಗಳ ಪುನರ್ವಸತಿ, ಹಾಗೂ ಜೈಲು ಆಡಳಿತದಲ್ಲಿ ಕಂಡುಬರುವ ಆಡಳಿತ ಸುಧಾರಣೆಗಳು, ಅತ್ಯುತ್ತಮ ಆಚರಣೆಗಳು ಮತ್ತು ಮೂಲಸೌಕರ್ಯ ಅಭಿವೃದ್ಧಿಪಡಿಸಲು ಹೆಚ್ಚಿನ ಆದ್ಯತೆ ನೀಡಲಾಗಿದೆ.

ಈ ಮಾಹಿತಿ ಜಾಲತಾಣವು ಸಿಬ್ಬಂದಿ ಸ್ಥಾನವನ್ನು, ಆಯವ್ಯಯದ ನಿಬಂಧನೆಗಳನ್ನು, ಜೈಲು ಕೈಗಾರಿಕೆಗಳು ಮತ್ತು ಸಂಬಂಧಿತ ಮಾಹಿತಿ ಬಗ್ಗೆ ಮಾಹಿತಿಯನ್ನು ಒಳಗೊಂಡಿದೆ.

ನಾವು ಮನಃಪೂರ್ವಕವಾಗಿ ಈ ಮಾಹಿತಿ ಜಾಲತಾಣಕ್ಕೆ ನಿಮ್ಮ ಭೇಟಿ ಉಪಯುಕ್ತ ಎಂದು ಭಾವಿಸುತ್ತೇವೆ. ನಿಮ್ಮ ಸಮಯಕ್ಕೆ ಧನ್ಯವಾದಗಳು.

ಸಂದೇಶ

ಕರ್ನಾಟಕ ಕಾರಾಗೃಹ ಮತ್ತು ಸುಧಾರಣಾ ಸೇವೆ ಇಲಾಖೆಯ ಜಾಲತಾಣಕ್ಕೆ ನಿಮಗೆ ಸ್ವಾಗತ. ಈ ಜಾಲತಾಣದ ಮೂಲಕ ನಾವು ನಿಮಗೆ ರಾಜ್ಯದ ಕಾರಾಗೃಹ ಮತ್ತು ಕಾರಾಗೃಹಗಳ ಸಂಬಂಧಿತ ಮಾಹಿತಿಗಳನ್ನು ಪ್ರಕಟಿಸಿದ್ದೇವೆ. ಈ ಜಾಲತಾಣವು ಸಂಪೂರ್ಣವಾಗಿ ನಿಮ್ಮ ನಿರೀಕ್ಷೆ ಪೂರೈಸುತ್ತದೆ ಎಂದು ನಾವು ಭಾವಿಸಿದ್ದೇವೆ. ಈ ಜಾಲತಾಣವು ಸಿಬ್ಬಂದಿ ಸ್ಥಾನವನ್ನು, ಆಯವ್ಯಯದ ನಿಬಂಧನೆಗಳನ್ನು, ಜೈಲು ಕೈಗಾರಿಕೆಗಳು ಮತ್ತು ಸಂಬಂಧಿತ ಮಾಹಿತಿ ಬಗ್ಗೆ ಮಾಹಿತಿಯನ್ನು ಒಳಗೊಂಡಿದೆ. ನಾವು ಮನಃಪೂರ್ವಕವಾಗಿ ಈ ಜಾಲತಾಣಕ್ಕೆ ನಿಮ್ಮ ಭೇಟಿ ಉಪಯುಕ್ತ ಎಂದು ಭಾವಿಸುತ್ತೇವೆ. ನಿಮ್ಮ ಸಮಯಕ್ಕೆ ಧನ್ಯವಾದಗಳು.

ಸಂಘಟನೆ

ಕಾರಾಗೃಹ ಮತ್ತು ಸುಧಾರಣಾ ಸೇವೆ ಇಲಾಖೆ ಕರ್ನಾಟಕ ಸರ್ಕಾರದ ಗೃಹ ಸಚಿವರ ಉಸ್ತುವಾರಿಯಲ್ಲಿದ್ದು, ಗೃಹ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳು ಹಾಗೂ ಸರ್ಕಾರದ ಕಾರ್ಯದರ್ಶಿಗಳು (ಪಿಸಿಎಎಸ್) ಅಧೀನದಲ್ಲಿ ಕಾರ್ಯನಿರ್ವಹಿಸುತ್ತದೆ. ಪೋಲೀಸ್ ಮಹಾನಿರ್ದೇಶಕರು, ಕಾರಾಗೃಹ ಮತ್ತು ಸುದಾರಣಾ ಸೇವೆ ಇಲಾಖೆ, ಕರ್ನಾಟಕ ರಾಜ್ಯ ರವರು ಇಲಾಖೆಯ ಮುಖ್ಯಸ್ಧರಾಗಿರುತ್ತಾರೆ. ಪೋಲೀಸ್ ಉಪಮಹಾನಿರೀಕ್ಷಕರು ಐ.ಪಿ,ಎಸ್ (ಕಾರಾಗೃಹ), ಕಾರಾಗೃಹಗಳ ಉಪಮಹಾನಿರೀಕ್ಷಕರು, ಪೋಲೀಸ್ ಅಧೀಕ್ಷಕರು, ಐ.ಪಿ.ಎಸ್ (ಕಾರಾಗೃಹ), ಕಾರಾಗೃಹಗಳ ಅಧೀಕ್ಷಕರು ಮತ್ತು ಆಡಳಿತಾಧಿಕಾರಿಗಳು ಕೇಂದ್ರ ಕಚೇರಿಯಲ್ಲಿ ಸಹಾಯಕರಾಗಿರುತ್ತಾರೆ. ರಾಜ್ಯದ ವಲಯ ಮಟ್ಟದಲ್ಲಿ ಕಾರಾಗೃಹಗಳ ಉಪ ಮಹಾನಿರೀಕ್ಷಕರು ಮತ್ತು ಎಲ್ಲಾ ಕೇಂದ್ರ/ ಜಿಲ್ಲಾ/ ತಾಲ್ಲೂಕು ಕಾರಾಗೃಹಗಳಲ್ಲಿ, ಮುಖ್ಯ ಅಧೀಕ್ಷಕರು / ಅಧೀಕ್ಷಕರುಗಳು ಸಂಬಂಧಿಸಿದ ಕಾರಾಗೃಹಗಳ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿರುತ್ತಾರೆ.

ಸಂಪರ್ಕಿಸಿ

ವಿಳಾಸ:

ಪೋಲೀಸ್ ಮಹಾನಿರ್ದೇಶಕರು, ಕರ್ನಾಟಕ ಕಾರಾಗೃಹ ಮತ್ತು ಸುಧಾರಣಾ ಸೇವೆ
ನೆಂ.೪ ಶೇಷಾದ್ರಿ ರಸ್ತೆ ,ಬೆಂಗಳೂರು -560009
ಕರ್ನಾಟಕ ರಾಜ್ಯ .
Ph : 080 22262263
Email : Phq.prisons-kar@gov.in

ಮಾಹಿತಿಗಳು
ಸೌಲಭ್ಯ
ಜಾಹೀರಾತುಗಳು ಮತ್ತು ಟೆಂಡರ್

ಹಕ್ಕುಗಳು : ಇಲಾಖೆ ಕಾರಾಗೃಹ , ಇವರಿಂದ ಒದಗಿಸಲಾಗುತ್ತದೆ ಪರಿವಿಡಿ . ಕರ್ನಾಟಕ

ಕೊನೆಯ ನವೀಕರಣ: 19th AUG 2016

© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ -2013.

ವೆಬ್ಸೈಟ್ ವಿನ್ಯಾಸ ಮತ್ತು ಹೋಸ್ಟ್