ಧ್ಯೇಯ

ಕಾರಾಗೃಹಗಳು ದಂಡ ನ್ಯಾಯ ವ್ಯವಸ್ಥೆಯ ಅವಿಭಾಜ್ಯ ಅಂಗವಾಗಿದೆ. ಸಜಾ ಬಂದಿಗಳು ಮತ್ತು ವಿಚಾರಣಾಧೀನ ಬಂಧಿಗಳ ಸುರಕ್ಷಿತ ಅಭಿರಕ್ಷೆಗಾಗಿ ಕಾರಾಗೃಹಗಳನ್ನು ಸ್ಥಾಪಿಸಲಾಗಿದೆ. ಕಾರಾವಾಸ ದಂಡಾದೇಶ ವಿಧಿಸುವ ಉದ್ದೇಶ ಮತ್ತು ಔಚಿತ್ಯವೇನೆಂದರೆ, ಸಮಾಜವನ್ನು ಅಪರಾಧದ ವಿರುದ್ಧ ಮತ್ತು ಪ್ರತೀಕಾರದ ವಿರುದ್ಧ ರಕ್ಷಿಸುವುದು ಮತ್ತು ಸತತ ತರಬೇತಿ, ವಿದ್ಯಾಭ್ಯಾಸ ಮತ್ತು ಪರಸ್ಪರ ತಿಳುವಳಿಕೆಗಳಿಂದ ಸುಧಾರಿತ ನಾಗರೀಕನಾಗಿ ಮಾಡಿ ಸಮಾಜದಲ್ಲಿ ಪುನರ್ ಸೇರ್ಪಡೆ ಮಾಡಲು ಬದ್ದವಾಗಿದೆ.

ಸಂಘಟನೆ

ಇಲಾಖೆಯು ಗೃಹ ಸಚಿವರ ಉಸ್ತುವಾರಿಯಲಿದ್ದು, ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ಪ್ರಧಾನ ಕಾರ್ಯದರ್ಶಿಗಳು (ಪೀ ಸೀ ಎ ಎಸ್) ಅಧೀನದಲ್ಲಿ ಕಾರ್ಯನಿರ್ವಹಿಸುತ್ತದೆ. ಪೋಲೀಸ್ ಮಹಾನಿರ್ದೇಶಕರು ಮತ್ತು ಕರ್ನಾಟಕದ ಕಾರಾಗೃಹಗಳ ಮಹಾನಿರೀಕ್ಷಕರು ಕಾರಾಗೃಹಗಳ ಇಲಾಖೆಯ ಮುಖ್ಯಸ್ಥರಾಗಿರುತ್ತಾರೆ. ಪೋಲೀಸ್ ಉಪಮಹನಿರೀಕ್ಷಕರು(ಕಾರಾಗೃಹ), ಹೆಚ್ಚುವರಿ ಕಾರಾಗೃಹಗಳ ಮಹನಿರೀಕ್ಷಕರು(ಕೇಂದ್ರ ಕಾರ್ಯಸ್ಥಾನ) ಮತ್ತು ಪತ್ರಾಂಕಿತ ವ್ಯವಸ್ಥಾಪಕರು ಕೇಂದ್ರ ಕಚೀರಿಯಲ್ಲಿ ಸಹಾಯಕರಾಗಿರುತ್ತಾರೆ. ಎಲ್ಲ ಕೇಂದ್ರ/ ಜಿಲ್ಲಾ, ಕಾರಾಗೃಹಗಳ ಮುಖ್ಯ ಅಧೀಕ್ಷಕರು / ಅಧೀಕ್ಷಕರುಗಳು ಸಂಬಂಧಿಸಿದ ಕಾರಾಗೃಹಗಳ ಉಸ್ತುವಾರಿಯನ್ನು ನೋಡಿಕೊಳ್ಳುತಿರುತ್ತಾರೆ.

ಹಿಂದಿನಪುಟ | ಮುಂದಿನಪುಟ

ಹಕ್ಕುಗಳು ಇವರಿಂದ : ಇಲಾಖೆ ಕಾರಾಗೃಹ , ಇವರಿಂದ ಒದಗಿಸಲಾಗುತ್ತದೆ ಪರಿವಿಡಿ . ಕರ್ನಾಟಕ

ಕೊನೆಯ ನವೀಕರಣ: ೧೮ ನವೆಂಬರ್ ೨೦೧೪

© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ -೨೦೧೩.

ವೆಬ್ಸೈಟ್ ವಿನ್ಯಾಸ ಮತ್ತು ಹೋಸ್ಟ್