ಬಂದಿಗಳ ಇಚ್ಛೆಗೆ ಅನುಗುಣವಾಗಿ ವಿವಿಧ ವೃತ್ತಿಗಳಲ್ಲಿ ತರಬೇತಿ

  • ಆಧುನಿಕ ರೀತಿಯಲ್ಲಿ ಕೃಷಿ ಮತ್ತು ತೋಟಗಾರಿಕೆ, ರೇಷ್ಮೆ ಸಾಕಾಣಿಕೆ, ಕುರಿ ಸಾಕಾಣಿಕೆ ಮತ್ತು ಹೈನುಗಾರಿಕೆಯಲ್ಲಿ ತರಬೇತಿ
  • ಮಜೂರಿ ಗಳಿಕೆ ಯೋಜನೆ
  • ಶಿಕ್ಷಣ ಮುಂದುವರಿಕೆ ಹಾಗೂ ವಾಚನಾಲಯ
  • ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು
  • ಸಂದರ್ಶನ, ದೂರವಾಣಿ ಸೌಲಭ್ಯ, ಪತ್ರ ವ್ಯವಹಾರ
  • ಉಪಹಾರಗೃಹ ಅನುಕೂಲತೆ
  • ಪಂಚಾಯತಿ ಪದ್ದತಿ
  • ಪೆರೋಲ್, ತುರ್ತು ಪೇರೋಳೆ ಮತ್ತು ಫರ್ಲೊ ಬಿಡುಗಡೆ
  • ಮಾಫಿ ಪದ್ದತಿ, ಅವಧಿಪೂರ್ವ ಬಿಡುಗಡೆ

ಸುಧಾರಣಾ ಕ್ರಮಗಳು

ಬಂದಿಗಳು ಬಿಡುಗಡೆಯಾದ ನಂತರ ಸಮಾಜದಲ್ಲಿ ಒಳ್ಳೆಯ ನಾಗರಿಕರಾಗಿ ಬಾಳುವಂತೆ ಹಾಗೂ ಅಪರಾಧ ಮನೋಭಾವನೆ ಪುನರಾವರ್ತನೆಗೊಳ್ಳದಂತೆ ನೋಡಿಕೊಳ್ಳಲು ಈ ಕೆಳಕಂಡ ಸುಧಾರಣಾ ಕ್ರಮಗಳು ಜಾರಿಯಲ್ಲಿವೆ.

ಕಾರಾಗೃಹಗಳ ಕೈಗಾರಿಕೆಗಳನ್ನು ಮೇಲ್ದರ್ಜೆಗೇರಿಸುವುದು

ಕಾರಾಗೃಹಗಳಲ್ಲಿರುವ ಕೈಗಾರಿಕೆಗಳು ಸುಮಾರು ೨೫ ರಿಂದ ೩೦ ವರ್ಷಗಳ ಹಿಂದೆ ಸ್ಥಾಪಿತವಾಗಿದ್ದವಾಗಿದ್ದು, ಅವು ಹಳೆಯ ಮಾದರಿಯಾಗಿದ್ದು ಅಲ್ಲಿರುವ ಯಂತ್ರೋಪಕರಣಗಳು ಸಹ ಹಳೆಯ ಮಾದರಿಯದ್ದಾಗಿರುತ್ತವೆ. ಕಾರಾಗೃಹಗಳ ಕೈಗಾರಿಕೆಗಳನ್ನು ಉನ್ನತ ದರ್ಜೆಗೆ ಏರಿಸುವ ಅಂದರೆ ಹಳೆಯ ಯಂತ್ರೋಪಕರಣಗಳ ಬದಲಿಗೆ ಹೊಸ ಯಂತ್ರೋಪಕರಣಗಳನ್ನು ಅಳವಡಿಸುವುದು ಅವಶ್ಯವಿದೆ ಹಾಗೂ ಚಾಲ್ತಿಯಲ್ಲಿರುವ ವೃತ್ತಿಗಳಲ್ಲಿ ಬಂದಿಗಳಿಗೆ ತರಬೇತಿ ನೀಡಿ ಅವರನ್ನು ಆಯಾ ಕೈಗಾರಿಕೆಗಳಲ್ಲಿ ಕೆಲಸದಲ್ಲಿ ತೊದಗಿಸುವುದು ಅವಶ್ಯಕವಿದೆ. ಈ ನಿಟ್ಟಿನಲ್ಲಿ ಕಾರಾಗೃಹಗಳ ಕೈಗಾರಿಕೆಗಳನ್ನು ಆಧುನೀಕರಿಸಲು ಹಾಗೂ ಉನ್ನತ ದರ್ಜೆಗೇರಿಸಲು ಸರ್ಕಾರದಿಂದ ಅನುದಾನ ಲಭ್ಯವಾಗುವುದು ಅತ್ಯಲ್ಪವಾಗಿರುತ್ತದೆ. ಕೈಗಾರಿಕೆಗಳಲ್ಲಿ ಯಂತ್ರೋಪಕರಣಗಳು ದುರಸ್ತಿ ಕಾಣದೆ ಮತ್ತು ಕೆಲವೊಂದು ಕಾರ್ಖಾನೆಗಳಲ್ಲಿ ಭೋದಕರಿಲ್ಲದೆ ಭಾಗಶ: ಕಾರ್ಖಾನೆಗಳು ಸ್ತಗಿತಗೊಂಡಿರುತ್ತವೆ. ಕಾರಾಗೃಹಗಳ ಕೈಗಾರಿಕೆಗಳನ್ನು ಮೇಲ್ದರ್ಜೆಗೇರಿಸುವುದು ಅತ್ಯವಶ್ಯವಾಗಿರುತ್ತದೆ. ಕಾರಾಗೃಹಗಳ ಕೈಗಾರಿಕೆಗಳನ್ನು ಆಧುನೀಕರಿಸಲು ಹಾಗೂ ಅಲ್ಲಿನ ಸೋಪ್ ಮತ್ತು ಫಿನಾಯಿಲ್ ತಯಾರಿಕೆ, ಪಾದರಕ್ಷೆ ತಯಾರಿಕೆ ಹಾಗೂ ಕೈಮಗ್ಗ ಈ ಕ್ಷೇತ್ರಗಳಲ್ಲಿ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳಲ್ಲೂ ಸಂಬಂದಿಸಿದ ಸರ್ಕಾರದ ಹಾಗೂ ಸರ್ಕಾರದ ಅಧೀನ ಸಂಸ್ಥೆಗಳ ಮತ್ತು ಖಾಸಗಿ ಉದ್ಯಮಗಳ ಸಹಕಾರವನ್ನು ಕೋರಲಾಗಿದೆ.

ಕೇಂದ್ರ ಕಾರಾಗೃಹಗಳಲ್ಲಿ ಸ್ಥಾಪಿತವಾಗಿರುವ ವಿವಿಧ ಕೈಗಾರಿಕೆಗಳು

ಕೇಂದ್ರ ಕಾರಾಗೃಹ ಬೆಂಗಳೂರು ನೇಯ್ಗೆ, ಸೋಪು ತಯಾರಿಕೆ, ಬಡಗಿ, ಕಮ್ಮಾರಿಕೆ, ಬಟ್ಟೆಗೆ ರಂಗು ಹಾಕುವುದು, ಮುದ್ರಣ, ಬಟ್ಟೆ ಹೊಲಿಯುವುದು, ಮರದ ಪೀಠೋಪಕರಣ ತಯಾರಿಕೆ, ಬೇಕರಿ ಉತ್ಪನ್ನ ತಯಾರಿಕಾ ಘಟಕ
ಕೇಂದ್ರ ಕಾರಾಗೃಹ ಬೆಳಗಾವಿ ನೇಯ್ಗೆ, ಸೋಪು ತಯಾರಿಕೆ, ಬಡಗಿ, ಕಮ್ಮಾರಿಕೆ, ಬಟ್ಟೆಗೆ ರಂಗು ಹಾಕುವುದು, ಮುದ್ರಣ, ಬಟ್ಟೆ ಹೊಲಿಯುವುದು, ಮರದ ಪಿಟೊಪಕರಣ ತಯಾರಿಕೆ, ಬೇಕರಿ, ಚರ್ಮದ ಪಾದರಕ್ಷೆ ತಯಾರಿಕೆ
ಕೇಂದ್ರ ಕಾರಾಗೃಹ ಬಿಜಾಪುರ ನೇಯ್ಗೆ, ಬಡಗಿ, ಕಮ್ಮಾರಿಕೆ, ಬಟ್ಟೆಗೆ ರಂಗು ಹಾಕುವುದು, ಮುದ್ರಣ, ಬಟ್ಟೆ ಹೊಲಿಯುವುದು, ಮರದ ಪಿಟೊಪಕರಣ ತಯಾರಿಕೆ, ಜಮಖಾನ ತಯಾರಿಕೆ
ಕೇಂದ್ರ ಕಾರಾಗೃಹ ಬಳ್ಳಾರಿ ನೇಯ್ಗೆ, ಬಟ್ಟೆ ಹೊಲಿಯುವುದು, ಸೋಪು ತಯಾರಿಕೆ, ನೂಲು ಬಟ್ಟೆ ತಯಾರಿಕೆ, ಪೀಠೋಪಕರಣ ತಯಾರಿಕೆ, ಜಮಖಾನ ತಯಾರಿಕೆ
ಕೇಂದ್ರ ಕಾರಾಗೃಹ ಗುಲಬರ್ಗಾ ನೇಯ್ಗೆ, ಬಟ್ಟೆ ಹೊಲಿಯುವುದು, ಸೋಪು ತಯಾರಿಕೆ, ನೂಲು ಬಟ್ಟೆ ತಯಾರಿಕೆ, ಟೆಂಟ್ ಮತ್ತು ಶಾಮಿಯಾನ ತಯಾರಿಕೆ
ಕೇಂದ್ರ ಕಾರಾಗೃಹ ಮೈಸೂರು ನೇಯ್ಗೆ, ಸೋಪು ತಯಾರಿಕೆ, ಬಡಗಿ, ಕಮ್ಮಾರಿಕೆ, ಬಟ್ಟೆಗೆ ರಂಗು ಹಾಕುವುದು, ಮುದ್ರಣ, ಬಟ್ಟೆ
ಕೇಂದ್ರ ಕಾರಾಗೃಹ ಧಾರವಾಡ ಬಟ್ಟೆ ಹೊಲಿಯುವುದು, ಬಡಗಿ, ಮರದ ಪೀಠೋಪಕರಣ ತಯಾರಿಕೆ

ಹಿಂದಿನಪುಟ | ಮುಂದಿನಪುಟ

ಹಕ್ಕುಗಳು ಇವರಿಂದ :ಇಲಾಖೆ ಕಾರಾಗೃಹ , ಇವರಿಂದ ಒದಗಿಸಲಾಗುತ್ತದೆ ಪರಿವಿಡಿ . ಕರ್ನಾಟಕ

ಕೊನೆಯ ನವೀಕರಣ: ೧೮ ನವೆಂಬರ್ ೨೦೧೪

© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ -೨೦೧೩.

ವೆಬ್ಸೈಟ್ ವಿನ್ಯಾಸ ಮತ್ತು ಹೋಸ್ಟ್