ವೀಡಿಯೋ ಕಾನ್ಫರೆನ್ಸಿಂಗ್ :

ಎಲೆಕ್ಟ್ರಾನಿಕ್ ಮಾಧ್ಯಮದ ಮೂಲಕ ಬಂದಿಗಳನ್ನು ನ್ಯಾಯಾಲಯಗಳ ಮುಂದೆ ಹಾಜರುಪಡಿಸುವ ವಿನೂತನ ವ್ಯವಸ್ಧೆಯನ್ನು ಒದಗಿಸುವಲ್ಲಿ ಕರ್ನಾಟಕವು ಅಗ್ರಸ್ಧಾನದಲ್ಲಿದ್ದು ಪ್ರಸ್ತುತ 9 ಕೇಂದ್ರ ಕಾರಾಗೃಹಗಳು, 21 ಜಿಲ್ಲಾ ಕಾರಾಗೃಹಗಳು, 4 ಉಪಕಾರಗೃಹಗಳು ಮತ್ತು ಸಂಬಂದಿಸಿದ ನ್ಯಾಯಾಲಯಗಳ ನಡುವೆ ಚಾಲ್ತಿಯಲ್ಲಿವೆ.

ಈ ದೃಶ್ಯ ಮಾಧ್ಯಮ ಸಂವಾದ ವ್ಯವಸ್ಧೆಯಿಂದ ವಿಚಾರಣಾ ಬಂದಿಗಳನ್ನು ನ್ಯಾಯಾಲಯಗಳ ಮುಂದೆ ಶಾರೀರಿಕವಾಗಿ ಹಾಜರುಪಡಿಸಿ ಪ್ರಕರಣ ಮುಂದೂಡಿದಾಗ ಮತ್ತು ಅಥವಾ ನ್ಯಾಯಾಂಗ ಬಂಧನ ವಿಸ್ತರಣೆಯಾದಾಗ ಕಾರಾಗೃಹಗಳಿಗೆ ಹಿಂತಿರುಗಿ ತರುವ ಪ್ರಯಾಸ ತಪ್ಪಿಸಬಹುದಾಗಿದೆ. ಈ ವ್ಯವಸ್ಧೆಯು ತ್ವರಿತವಾಗಿ ವಿಚಾರಣೆ ನಡೆಸುವಲ್ಲಿ ಹಾಗೂ ಬಂದಿಗಳನ್ನು ನ್ಯಾಯಾಲಯಗಳ ಮುಂದೆ ಹಾಜರುಪಡಿಸುವಲ್ಲಿ ಆಗಬಹುದಾದ ಬಂದಿ ಪರಾರಿಯನ್ನು ತಪ್ಪಿಸಿ, ಸರ್ಕಾರಕ್ಕೆ ಆರ್ಥಿಕ ಹೊರೆ ಮುಂತಾದವುಗಳನ್ನು ಕಡಿಮೆ ಮಾಡುವುದಲ್ಲದೆ ಕಾರಾಗೃಹಗಳಲ್ಲಿ ವಿಚಾರಣಾ ಬಂದಿಗಳ ಹೆಚ್ಚಿನ ಸಂಖ್ಯೆಯ ಹೊರೆ ತಪ್ಪುತ್ತದೆ.

ಉನ್ನತ ಸ್ಪಷ್ಟತೆ ಮತ್ತು ಆಧುನಿಕ ಮಾದರಿಯ ವಿಡಿಯೋ ಕಾನ್ಪೆರೆನ್ಸಿಂಗ್ ಸೌಲಭ್ಯಃ

- 2016-17ನೇ ಸಾಲಿನಲ್ಲಿ ಉನ್ನತ ಸ್ಪಷ್ಟತೆ ಮತ್ತು ಆಧುನಿಕ ಮಾದರಿಯ ವಿಡಿಯೋ ಕಾನ್ಪೆರೆನ್ಸಿಂಗ್ ಸೌಲಭ್ಯವನ್ನು 09ಕಾರಾಗೃಹಗಳು ಮತ್ತು 22 ಗೌ|| ನ್ಯಾಯಾಲಯಗಳಲ್ಲಿ ಮತ್ತು 2018-19 ನೇ ಸಾಲಿನಲ್ಲಿ 10 ಆಧುನಿಕ ಮಾದರಿಯ ವಿಡಿಯೋ ಕಾನ್ಪೆರೆನ್ಸಿಂಗ್ ಸೌಲಭ್ಯವನ್ನು ವಿವಿಧ ಕಾರಾಗೃಹಗಳಿಗೆ ಮತ್ತು ನ್ಯಾಯಾಲಯಗಳಿಗೆ ಅಳವಡಿಸಲಾಗಿದೆ.

ಮಲ್ಟಿ ಪಾಯಿಂಟ್ ವೀಡಿಯೋ ಕಾನ್ಫರೆನ್ಸಿಂಗ್:

ಮಲ್ಟಿ ಪಾಯಿಂಟ್ ವೀಡಿಯೋ ಕಾನ್ಫರೆನ್ಸಿಂಗ್ ಇದು ದೇಶದಲ್ಲೇ ವಿನೂತನ ಉಪಕ್ರಮವಾಗಿದ್ದು ಈ ವ್ಯವಸ್ಥೆಯನ್ನು ಸಿಟಿ ಕೋರ್ಟ್ ಕಂಪೆಕ್ಷ್, ಬೆಂಗಳೂರು ಅಳವಡಿಸಲಾಗಿರುತ್ತದೆ. ಈ ವ್ಯವಸ್ಥೆಯು ವಿಚಾರಣೆ ನ್ಯಾಯಾಲಯ ಮತ್ತು ಬೆಂಗಳೂರು ಕೇಂದ್ರ ಕಾರಾಗೃಹವನ್ನೇ ಸಂಪರ್ಕದಲ್ಲಿಡುವುದರ ಜೊತೆಗೆ ಬೆಂಗಳೂರು ಹೊರಗಡೆ ಇರುವ ೪ ಕಾರಾಗೃಹಗಳನ್ನು ಏಕ ಕಾಲಕ್ಕೆ ಸಂಪರ್ಕ ಕಲ್ಪಿಸುತ್ತದೆ. ಇದರಿಂದ ಕ್ರಿಮಿನಲ್ ಮೊಕದ್ದಮೆಗೆ ಸಂಬಂಧಿಸಿದ ಬೆಂಗಳೂರಿನ ಹೊರಗಿರುವ ಕಾರಾಗೃಹಗಳಲ್ಲಿ ದಾಖಲಿರುವ ಬಂದಿಗಳನ್ನು ದೈಹಿಕವಾಗಿ ನ್ಯಾಯಾಲಯದ ಮುಂದೆ ಹಾಜರುಪಡಿಸದೆ ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಂವಾದ ನಡೆಸಬಹುದಾಗೀದೆ.

ಐ. ಪಿ. ದೂರವಾಣಿಗಳು

ವರದಿಯ ವರ್ಷದಲ್ಲಿ ಇ-ಆಡಳಿತ ಇಲಾಖೆಯ ಕೆಸ್ವಾನ್ ಯೋಜನೆಯಲ್ಲಿ ಕಾರಾಗೃಹಗಳಿಗೆ ಐ. ಪಿ ದೂರವಾಣಿಗಳನ್ನು ಅಳವಡಿಸಲು ಕ್ರಮ ಜರುಗಿಸಲು ಎಲ್ಲ ಕೇಂದ್ರ ಕಾರಾಗೃಹಗಳು ಹಾಗೂ ಜಿಲ್ಲಾ ಕೇಂದ್ರ ಉಪಕರಗೃಹಗಳಿಗೆ ಐ. ಪಿ ದೂರವಾಣಿಗಳನ್ನು ಒದಗಿಸಲಾಗಿದೆ.

ಬಂದಿಗಳಿಗೆ ದೂರವಾಣಿ ಸೌಲಭ್ಯ : ಇತರೆ ಕಾರಾಗೃಹಗಳಿಗೆ ವಿಸ್ತರಣೆ:

ದೇಶದಲ್ಲಿ ಪ್ರಥಮವೆಂಬಂತೆ ಬಂದಿಗಳಿಗೆ ಪೇ ಟೆಲಿಫೋನ್-ಪಾವತಿ ದೂರವಾಣಿ ಸೌಲಭ್ಯವನ್ನು ಒದಗಿಸಿಕೊಡಲಾಗಿದೆ. ಈ ಸೌಲಭ್ಯವನ್ನು ಪ್ರಪ್ರಥಮವಾಗಿ ಬೆಂಗಳೂರು ಮತ್ತು ಮೈಸೂರು ಕೇಂದ್ರ ಕಾರಾಗೃಹಗಳಲ್ಲಿ ಒದಗಿಸಲಾಗಿರುತ್ತದೆ. ಅನಂತರ ಈ ಸೌಲಭ್ಯವನ್ನು ಕೇಂದ್ರ ಕಾರಾಗೃಹ ಬೆಳಗಾವಿ(೧೫.೪.೦೮), ಗುಲ್ಬರ್ಗ(೯.೪.೦೮), ಬಿಜಾಪುರ(೮.೫.೦೮), ಧಾರವಾಡ (೨೧.೦೬.೦೮) ಮತ್ತು ಬಳ್ಳಾರಿ(೨೦.೬.೦೮) ವಿಸ್ತರಿಸಲಾಗಿದೆ. ಈ ಸೌಲಭ್ಯದ ಮೂಲಕ ಬಂದಿಗಳು ಅವರ ಸಂಬಂದಿಕರೊಡನೆ, ಮತ್ತು ವಕೀಲರೊಡನೆ ಸಂಭಾಷಣೆ ಮಾಡಲು ಅವರಿಗೆ ನೀಡಲಾಗಿರುವ ಪ್ರೇಪೆಯ್ಡ್ ಕಾರ್ಡು ಮೂಲಕ ಅನುಕೂಲ ಕಲ್ಪಿಸಲಾಗಿದೆ.

ಹಿಂದಿನಪುಟ | ಮುಂದಿನಪುಟ

ಹಕ್ಕುಗಳು ಇವರಿಂದ :ಇಲಾಖೆ ಕಾರಾಗೃಹ , ಇವರಿಂದ ಒದಗಿಸಲಾಗುತ್ತದೆ ಪರಿವಿಡಿ . ಕರ್ನಾಟಕ

ಕೊನೆಯ ನವೀಕರಣ: ೧೮ ನವೆಂಬರ್ ೨೦೧೪

© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ -೨೦೧೩.

ವೆಬ್ಸೈಟ್ ವಿನ್ಯಾಸ ಮತ್ತು ಹೋಸ್ಟ್